ಗುರಿ

ಕಲ್ಯಾಣ ಕರ್ನಾಟಕದ ಭಾಗದಲ್ಲಿ ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಹಿಂದುಳಿದ ಪ್ರತಿಭಾವಂತ ಯುವಕ-ಯುವತಿಯರ ಸರ್ವಾಂಗೀಣ ಅಭಿವೃದ್ಧಿಗೆ ಪಣತೊಡುವುದು. ಈ ಪ್ರದೇಶದ ಮಹಿಳೆಯರ ಸಬಲೀಕರಣಕ್ಕೆ ಒತ್ತು ನೀಡಲಾಗುವುದು. ಕಲ್ಯಾಣ ಕರ್ನಾಟಕ ಭಾಗದ ರೈತರಲ್ಲಿ ಸಾಂಪ್ರದಾಯಿಕ ಕೃಷಿಯ ಜೊತೆ ಜೊತೆಗೆ ವೈಜ್ಞಾನಿಕ ಕೃಷಿಯ ಅರಿವು ಮೂಡಿಸುವುದು ಹಾಗೂ ತಂತ್ರಜ್ಞಾನಗಳನ್ನು ಪರಿಚಯಿಸುವುದು.

ಮಿಷನ್

ಕಲ್ಯಾಣ ಕರ್ನಾಟಕ ಹಿಂದಿನಿಂದಲೂ ಜಾತಿ, ಮತ, ಧರ್ಮ, ಭಾಷೆ, ಸಂಸ್ಕೃತಿಯ ಭೇದವಿಲ್ಲದೆ, ಸರ್ವ ಜನಾಂಗದ ಶಾಂತಿಯ ತೋಟ ಎಂದು ತೋರಿಸಿ ಕೊಟ್ಟಿದೆ. ಈ ಭಾಗದ ಹಿಂದುಳಿದ ಜನರ ಉನ್ನತೀಕರಣಕ್ಕೆ ಬೆನ್ನೆಲುಬಾಗಿ ನಿಲ್ಲುವ ಧ್ಯೇಯ ನಮ್ಮದು. ಶೈಕ್ಷಣಿಕ ಕ್ರಾಂತಿ, ಉದ್ಯೋಗ ಕ್ರಾಂತಿ, ಆರೋಗ್ಯ ಕ್ರಾಂತಿಯ ಮೂಲಕ ಸಾಮಾನ್ಯ ಜನರನ್ನು ಸಾಮಾಜಿಕ ಹಾಗೂ ಆರ್ಥಿಕ ಅಡೆತಡೆಗಳಿಂದ ಮೇಲೆತ್ತಲಾಗುವುದು.

.
.
.
.

Chairman words

ಕಾಯಕ ಯೋಗಿ ಬಸವಣ್ಣನವರ ಕರ್ಮಭೂಮಿಯಲ್ಲಿ ಹುಟ್ಟಿ ಬೆಳೆದವನು ನಾನು. ಅವರ ತತ್ವ ಸಿದ್ಧಾಂತಗಳನ್ನು ಕೇವಲ ಪುಸ್ತಕಗಳಲ್ಲಿ ಅಷ್ಟೇ ಅಲ್ಲದೆ, ಜೀವನದಲ್ಲೂ ರೂಢಿಗೆ ತಂದು, ಅದರಂತೆಯೇ ನಡೆಯುತ್ತಿದ್ದೇನೆ. ಕಲ್ಯಾಣ ಕರ್ನಾಟಕ ಅನೇಕ ವರ್ಷಗಳಿಂದ ಅಭಿವೃದ್ಧಿಯನ್ನು ಬಯಸಿ ಕುಳಿತಿದೆ. ಈ ಭೂಮಿಯಲ್ಲಿ ಸತ್ವವಿದೆ. ಇಲ್ಲಿನ ಜನರಲ್ಲಿ ಕಾಯಕ ಮಾಡುವ ಛಲವಿದೆ. ಇವರು ಹುಡುಕ್ಕುತ್ತಿರುವುದು ಒಂದು ಚಿಕ್ಕ ಆಧಾರವನ್ನು, ಆ ಆಧಾರವನ್ನು ನೀಡಲು ನಾವು ಸ್ಥಾಪಿಸಿದ್ದೇವೆ ತಾಳಂಪಳ್ಳಿ ಪೌಂಡೇಶನ್.

1995ರಲ್ಲಿ ಬಸವಕಲ್ಯಾಣ ಶಿಕ್ಷಣ ಟ್ರಸ್ಟ್ ಮೂಲಕ ಬಸವಕಲ್ಯಾಣದಲ್ಲಿ ಶಿಕ್ಷಣ ಕ್ರಾಂತಿಗೆ ಹೆಜ್ಜೆ ಇಡಲಾಗಿತ್ತು. ಇಂದು ಈ ಸಂಸ್ಥೆ ಹೆಮ್ಮರವಾಗಿ ಬೆಳೆದಿದೆ. ಶಿಕ್ಷಣಕ್ಕಾಗಿ ನಮ್ಮ ಊರಿನ ಯುವಕ-ಯುವತಿಯರು ಬೆಂಗಳೂರು, ಹುಬ್ಬಳ್ಳಿ, ಮಂಗಳೂರು, ಹೀಗೆ ಪರ ಊರಿಗೆ ತೆರಳಿ ಎಂಜಿನಿಯರಿಂಗ್ ಶಿಕ್ಷಣ ಪಡೆಯಬೇಕಾದ ಸಂದರ್ಭದಲ್ಲಿ ನಮ್ಮ ಸಂಸ್ಥೆ ಈ ಸಮಸ್ಯೆಯನ್ನು ಮನಗಂಡು, ಬಸವಕಲ್ಯಾಣದಲ್ಲಿ ಎಂಜಿನಿಯರಿಂಗ್ ಕಾಲೇಜು ಸ್ಥಾಪಿಸಿ, ಸಾವಿರಾರು ಬಡ ವಿದ್ಯಾರ್ಥಿಗಳಿಗೆ ಆಸರೆ ನೀಡಿದೆ. ಇಂದು ನಮ್ಮ ಶಿಕ್ಷಣ ಸಂಸ್ಥೆಯಿಂದ ಶಿಕ್ಷಣ ಪಡೆದು ಜಗತ್ತಿನ ಮೂಲೆ ಮೂಲೆಯಲ್ಲಿ ನೆಲೆಸಿ, ಸಾಧನೆಗೈಯುತ್ತಿರುವವರನ್ನು ಕಂಡಾಗ ನಮ್ಮ ಸಂಸ್ಥೆಯ ಮೇಲೆ ಹೆಮ್ಮೆ ಅನ್ನಿಸುತ್ತದೆ

ವಿದ್ಯಾದಾನ ಮಾಡುವುದೊಂದೇ ನಮ್ಮ ಗುರಿಯಲ್ಲ, ವಿದ್ಯೆ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಅವರ ಕಾಲ ಮೇಲೆ ನಿಲ್ಲಿಸುವುದು ಕೂಡ ನಮ್ಮ ಗುರಿ. ಈ ಉದ್ದೇಶದಿಂದ ಬಸವಕಲ್ಯಾಣದಲ್ಲಿ ಬೃಹತ್ ಉದ್ಯೋಗ ಮೇಳಗಳನ್ನು ಕಾಲಕಾಲಕ್ಕೆ ಹಮ್ಮಿಕೊಳ್ಳುತಿದ್ದೇವೆ. ಈ ಮೂಲಕ ಸಾವಿರಾರು ವಿದ್ಯಾರ್ಥಿಗಳು ತಮ್ಮ ಕನಸಿನ ಉದ್ಯೋಗವನ್ನು ಪಡೆಯುತ್ತಿದ್ದಾರೆ.
ಆದರೆ ಉದ್ಯೋಗ ಪಡೆದ ಯುವಕ ಯುವತಿಯರು ಊರು ತೊರೆದು ಪಟ್ಟಣ ಸೇರುತ್ತಿದ್ದಾರೆ. ಇದರಿಂದ ಊರು ಬಡವಾಗುತ್ತಿದೆ. ಪಾಲಕರು ತಮ್ಮ ಮುಪ್ಪಿನ ಕಾಲದಲ್ಲಿ ತಮ್ಮ ಮಕ್ಕಳೊಂದಿಗೆ ಇರಲಾಗದ ಪರಿಸ್ಥಿತಿಯನ್ನು ಕಂಡು, ಇದಕ್ಕೆ ಪರಿಹಾರವನ್ನು ಹುಡುಕುತಿದ್ದ ಸಂದರ್ಭದಲ್ಲಿ ನನಗೆ ಸಿಕ್ಕ ಉತ್ತರ, ಬಸವಕಲ್ಯಾಣದಲ್ಲಿಯೇ ವಿವಿಧ ಕಂಪನಿಗಳಿಗೆ, ಕೈಗಾರಿಕೆಗಳಿಗೆ ಹೂಡಿಕೆ ಮಾಡಲು ಅನುವು ಮಾಡಿ ಕೊಡುವುದು. ಇದರಿಂದ ಊರು ಕೂಡ ಬೆಳೆಯುತ್ತದೆ. ಹಾಗೆಯೇ ಅಭಿವೃದ್ಧಿಯನ್ನು ಕೂಡ ಕಾಣುತ್ತದೆ.

ಊರು ಬೆಳೆದಂತೆ ಜಗತ್ತಿನ ವಿವಿಧ ಭಾಗಗಳಿಂದ ಜನರು ನಮ್ಮ ಬಸವಕಲ್ಯಾಣಕ್ಕೆ ಬರುತ್ತಾರೆ. ಈ ಬೆಳವಣಿಗೆ ಬಸವಕಲ್ಯಾಣವನ್ನು ಒಂದು ಸುಸಜ್ಜಿತ ಪ್ರವಾಸಿ ತಾಣ ಮಾಡಲೂ ಕೂಡ ಸಹಾಯವಾಗುತ್ತದೆ. ಬಸವಕಲ್ಯಾಣಕ್ಕೆ ಕರ್ನಾಟಕದ ಪ್ರಸಿದ್ಧ ಪ್ರವಾಸಿ ತಾಣ ಆಗುವ ಎಲ್ಲಾ ಅರ್ಹತೆಗಳಿವೆ. ಲಿಂಗಾಯತ ಸಮುದಾಯಕ್ಕೆ ಕೂಡಲಸಂಗಮ ಎಷ್ಟು ಪವಿತ್ರ ಸ್ಥಳವೋ, ಹಾಗೆ ಬಸವಕಲ್ಯಾಣ ಕೂಡ ಒಂದು ಪವಿತ್ರ ಸ್ಥಳ. ಪ್ರವಾಸೋದ್ಯಮ ಬಸವಕಲ್ಯಾಣಲ್ಲಿ ವಿವಿಧ ಉದ್ಯೋಗ ಅವಕಾಶಗಳನ್ನು ತಂದು ಕೊಡಲಿದೆ.

ಈ ಎಲ್ಲಾ ಕನಸುಗಳನ್ನು ನನಸು ಮಾಡಲು ಅವಿರತ ಪ್ರಯತ್ನ ಮಾಡಲಿದೆ ನಮ್ಮ ತಾಳಂಪಳ್ಳಿ ಪೌಂಡೇಶನ್. ನಮ್ಮ ಪೌಂಡೇಶನ್ ವತಿಯಿಂದ ಇದೇ ಜುಲೈ ತಿಂಗಳಲ್ಲಿ ‘ ಸಖಿ ಕಾರ್ಯಕ್ರಮ’ ದ ಮೂಲಕ ಸರ್ಕಾರದ ವಿವಿಧ ಯೋಜನೆಗಳ ಅನುಕೂಲಗಳ ಕುರಿತು ಮಹಿಳೆಯರಿಗೆ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಾಗಾರ ಅತ್ಯಂತ ಯಶಸ್ವಿಯಾಗಿ ನಡೆದಿದ್ದು ಸಂತೋಷಕರ ಸಂಗತಿ.

ಮಾಡುವ ಕೆಲಸವನ್ನು ಮನಸ್ಸಿಟ್ಟು ಮಾಡು, ನೀಡುವ ದಾನವನ್ನು ನಿಜದಿಂದ ಮಾಡು, ಆಗಲೇ ಕೂಡಲಸಂಗಮದೇವ ನಿಮಗೆ ಒಲಿಯುವನು ಎಂಬ ಬಸವಣ್ಣನವರ ವಚನವನ್ನು ಪಾಲಿಸಿ, ಈ ಸಂಸ್ಥೆಯನ್ನು ಮುಂದುವರೆಸಿಕೊಂಡು ಹೋಗುತ್ತೇನೆ. ನನ್ನ ಈ ಕಾಯಕಕ್ಕೆ ನಾನು ನಿಮ್ಮಿಂದ ಬಯಸುವುದು ನಿಮ್ಮ ಆಶೀರ್ವಾದವನ್ನು. ಅದನ್ನು ನೀಡಿ ನನ್ನ ಹಾರೈಸಿ

Get In Touch

Email Us

Support@talampallyfoundation.com

Opening Hours

8:00 AM - 17:00 PM

Visit Us

Karnataka

Scroll to Top